Monday, October 12, 2009

ದೇಗುಲನಗರಿಯ ಕಾಮಗಾರಿ ಪ್ರಗತಿಯ ಚಿತ್ರಣ

ಇದೊ೦ದು ವಿಶೇಷವಾದ, ವಿಶ್ವದಲ್ಲಿಯೇ ಪ್ರಥಮವೆನ್ನಬಹುದಾದ ಪ್ರಯತ್ನ. ಒ೦ದುಸಾವಿರ ವರ್ಷಕ್ಕೂ ಮೇಲ್ಪಟ್ಟ ಇತಿಹಾಸವಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಹಳೆಯ ನಿರ್ಮಿತಿಯಲ್ಲಿದ್ದ ಶಿಲ್ಪ ಮತ್ತು ಕೆತ್ತನೆಗಳನ್ನು ಅವು ಹಿ೦ದೆ ಇದ್ದ ಮಾದರಿಯಲ್ಲಿಯೇ ಬಹಳ ಮುತುವರ್ಜಿ ಮತ್ತು ಕೌಶಲ ಬಳಸಿ ಪುನರ್ ಜೋಡಿಸಿ ಹಳೆಯ ದೇವಾಲಯವನ್ನು ಇದ್ದ ರೀತಿಯಲ್ಲಿಯೇ ಪುನರುಜ್ಜೀವನಗೊಳಿಸುವ ಕಾರ್ಯ ನಡೆದಿದೆ. ಈ ಮಹತ್ಕಾರ್ಯದ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೊ೦ದು ಛಾಯಾಚಿತ್ರ ಗಳನ್ನು ತಮ್ಮ ಅವಗಾಹನೆಗಾಗಿ ಕೊಡುತ್ತಿದ್ದೇವೆ.


































Saturday, October 10, 2009

ಫೋಟೋ ಗ್ಯಾಲರಿ

ದೇಗುಲನಗರಿಯ ಭವ್ಯ ನಕಾಶೆ - ಪುನರ್ ನಿರ್ಮಾಣ ಕಾಮಗಾರಿಯ ನ೦ತರದ ವಿಹ೦ಗಮ ಪಕ್ಷಿ ನೋಟ
ದೇವಾಲಯ ನಿರ್ಮಾಣದ ಹಿಂದಿನ ಪ್ರೇರಕಶಕ್ತಿಯಾಗಿರುವ ಮಹಾಪೋಷಕರು

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ

ದೇವಾಲಯ - ಪುನರ್ ನಿರ್ಮಾಣದ ಹಂತದಲ್ಲಿ


ಪುರಾತನ ದೇವಾಲಯದ ವಿಹ೦ಗಮ ನೋಟ






Tuesday, October 6, 2009

ಸಹ್ಯಾದ್ರಿಯ ಸೆರಗಿನ ಅಂಚಿನ ಸುಂದರ ತಾಣ

ದಟ್ಟ ಕಾನನದೊಳು ಅಡಗಿದೆ ಗತ ಇತಿಹಾಸದ ಸತ್ಯ
ಗಿಡಮರತೊರೆಗಳ ನಡುವಲ್ಲಿ ಕಲರವವಿದೆ ನಿತ್ಯ
ಹಸಿರುವನರಾಶಿಯ ಬನದಲಿ ಸ೦ಸ್ಕ್ರತಿಯ ಕುರುಹು
ಸಾವಿರ ವರುಷದ ಹಿಂದಿನ ದಿನಗಳ ವೈಭವದ ಮೆರುಗು


ಶಿಲ್ಪಕಲೆಗಳ ಖನಿಯಾಗಿತ್ತು ದೇಗುಲ ನಗರಿ
ರಾಜ ರಾಜರ ಆಡಳಿತದಲಿ ಮೂಡಿತು ಹೆಮ್ಮೆಯ ಗರಿ
ಉಮಾಮಹೇಶ್ವರನ ಸನ್ನಿಧಿಯಲ್ಲಿ ನಿತ್ಯವು ಸಂತೃಪ್ತಿ
ಹಕ್ಕಿ ಪಕ್ಷಿಗಳ ಉಲಿತದ ನಡುವೆ ಮನಸಿಗೆ ನೆಮ್ಮದಿ


ಸಸ್ಯಕಾಶಿಯ ಹಸಿರನು ಹೊದ್ದಿಹ ಸುಂದರ ಕಾನನವು
ಸಹ್ಯಾದ್ರಿ ಸೆರಗಿನ ಅಂಚಿನ ರಂಗಿನ ಮೋಹಕ ತಾಣವಿದು
ಅಪರೂಪದ ವನ್ಯರಾಶಿಯಿದೆ ದೇವರಕಾಡಿನಲಿ
ತು೦ಬಿದೆ ನೆಮ್ಮದಿ ಇಲ್ಲಿಗೆ ಬರುವ ಜನಮನದಲ್ಲಿ