Tuesday, October 6, 2009

ಸಹ್ಯಾದ್ರಿಯ ಸೆರಗಿನ ಅಂಚಿನ ಸುಂದರ ತಾಣ

ದಟ್ಟ ಕಾನನದೊಳು ಅಡಗಿದೆ ಗತ ಇತಿಹಾಸದ ಸತ್ಯ
ಗಿಡಮರತೊರೆಗಳ ನಡುವಲ್ಲಿ ಕಲರವವಿದೆ ನಿತ್ಯ
ಹಸಿರುವನರಾಶಿಯ ಬನದಲಿ ಸ೦ಸ್ಕ್ರತಿಯ ಕುರುಹು
ಸಾವಿರ ವರುಷದ ಹಿಂದಿನ ದಿನಗಳ ವೈಭವದ ಮೆರುಗು


ಶಿಲ್ಪಕಲೆಗಳ ಖನಿಯಾಗಿತ್ತು ದೇಗುಲ ನಗರಿ
ರಾಜ ರಾಜರ ಆಡಳಿತದಲಿ ಮೂಡಿತು ಹೆಮ್ಮೆಯ ಗರಿ
ಉಮಾಮಹೇಶ್ವರನ ಸನ್ನಿಧಿಯಲ್ಲಿ ನಿತ್ಯವು ಸಂತೃಪ್ತಿ
ಹಕ್ಕಿ ಪಕ್ಷಿಗಳ ಉಲಿತದ ನಡುವೆ ಮನಸಿಗೆ ನೆಮ್ಮದಿ


ಸಸ್ಯಕಾಶಿಯ ಹಸಿರನು ಹೊದ್ದಿಹ ಸುಂದರ ಕಾನನವು
ಸಹ್ಯಾದ್ರಿ ಸೆರಗಿನ ಅಂಚಿನ ರಂಗಿನ ಮೋಹಕ ತಾಣವಿದು
ಅಪರೂಪದ ವನ್ಯರಾಶಿಯಿದೆ ದೇವರಕಾಡಿನಲಿ
ತು೦ಬಿದೆ ನೆಮ್ಮದಿ ಇಲ್ಲಿಗೆ ಬರುವ ಜನಮನದಲ್ಲಿ

1 comment:

  1. ಕವನ ಚೆನ್ನಾಗಿದೆ. ದೇವಸ್ತಾನದ ಬಗ್ಗೆ ಇನ್ನಷ್ಟು ಮಾಹಿತಿ ಕೊಡಿ

    ReplyDelete